NMMS Scholarship 2026-27: ವಿದ್ಯಾರ್ಥಿಗಳಿಗೆ ₹12,000 ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆಗೆ ನವೆಂಬರ್‌ 7 ಕೊನೆಯ ದಿನ

WhatsApp Group Join WhatsApp Group
Telegram Channel Join Telegram Channel

ಹೌದು ಕರ್ನಾಟಕದ ಸರ್ಕಾರಿ, ಅನುದಾನಿತ ಮತ್ತು ಸ್ಥಳೀಯ ಸಂಸ್ಥೆಗಳ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಈ ಸ್ಕಾಲರ್‌ಶಿಪ್‌ನಡಿ ವಾರ್ಷಿಕ ₹12,000 ರೂ ಆರ್ಥಿಕ ನೆರವು ನೀಡಲಾಗುತ್ತದೆ. NMMS Scholarship 2026-27 ರಲ್ಲಿ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇದೇ ತಿಂಗಳು ನವೆಂಬರ್ 7 ರವರೆಗೆ ಗಡವು ನೀಡಲಾಗಿದೆ. ಪರೀಕ್ಷೆಗೆ ಸಂಬಂಧಿಸಿದಂತೆ ಅರ್ಹತೆ, ಪರೀಕ್ಷಾ ವಿಧಾನ, ಪ್ರಮುಖ ದಿನಾಂಕಗಳು ಮತ್ತು ಅರ್ಜಿ ಸಲ್ಲಿಕೆ ಕುರಿತು ಸಂಪೂರ್ಣ ವಿವರಗಳನ್ನು ನೀಡಲಾಗಿದೆ.

ಈ ವರ್ಷದ NMMS ಪರೀಕ್ಷೆಯ ದಿನಾಂಕವನ್ನೂ ಪ್ರಕಟಿಸಲಾಗಿದ್ದು, ಡಿಸೆಂಬರ್ 20, 2026 ರಂದು ಪರೀಕ್ಷೆ ನಡೆಯಲಿದೆ. ಇನ್ನೂ ಅರ್ಜಿ ಸಲ್ಲಿಸದ ಅರ್ಹ ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ನಿಗದಿತ ಅವಧಿಯೊಳಗೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಈ ಲೇಖನದಲ್ಲಿ NMMS ವಿದ್ಯಾರ್ಥಿವೇತನದ ಮೊತ್ತ, ಅರ್ಹತೆ, ಪರೀಕ್ಷೆಯ ಮಾದರಿ, ಅರ್ಜಿ ಸಲ್ಲಿಸುವ ವಿಧಾನ ಮತ್ತು ಅಗತ್ಯ ದಾಖಲೆಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ.

NMMS Scholarship 2026-27: ಪ್ರಮುಖ ಮಾಹಿತಿ

ವಿವರಗಳುಮಾಹಿತಿ
ಯೋಜನೆಯ ಹೆಸರುNational Means-cum-Merit Scholarship
ಶೈಕ್ಷಣಿಕ ವರ್ಷ2026-27
ಅರ್ಜಿ ಸಲ್ಲಿಸುವವರು8ನೇ ತರಗತಿ ವಿದ್ಯಾರ್ಥಿಗಳು
ಅರ್ಜಿ ಆರಂಭದ ದಿನಾಂಕಸೆಪ್ಟೆಂಬರ್ 23, 2026
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕನವೆಂಬರ್ 7, 2026
ಪರೀಕ್ಷೆಯ ದಿನಾಂಕಡಿಸೆಂಬರ್ 20, 2026
ವಿದ್ಯಾರ್ಥಿವೇತನದ ಮೊತ್ತವರ್ಷಕ್ಕೆ ₹12,000
ಮಾಸಿಕ ವಿದ್ಯಾರ್ಥಿವೇತನ₹1,000
ವಿದ್ಯಾರ್ಥಿವೇತನದ ಅವಧಿ9ರಿಂದ 12ನೇ ತರಗತಿಯವರೆಗೆ
ಪರೀಕ್ಷೆ ನಡೆಸುವ ಸಂಸ್ಥೆKSQAAC / ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ
ಅರ್ಜಿ ವಿಧಾನಶಾಲೆಯ ಮೂಲಕ ಆನ್‌ಲೈನ್
ಅಧಿಕೃತ ವೆಬ್‌ಸೈಟ್kseab.karnataka.gov.in

NMMS Scholarship ಎಂದರೇನು?

NMMS (National Means-cum-Merit Scholarship) ಎಂಬುದು ಆರ್ಥಿಕವಾಗಿ ಹಿಂದುಳಿದ ಪ್ರತಿಭಾವಂತ ವಿದ್ಯಾರ್ಥಿಗಳು ಮಾಧ್ಯಮಿಕ ಶಾಲಾ ಹಂತದಲ್ಲಿ ಶಾಲೆಯಿಂದ ಹೊರಗುಳಿಯುವುದನ್ನು (Dropout) ತಡೆಯಲು ಹಾಗೂ ಅವರ ವಿದ್ಯಾಭ್ಯಾಸವನ್ನು ಮುಂದುವರಿಸಲು ಪ್ರೇರೇಪಿಸಲು ಕೇಂದ್ರ ಸರ್ಕಾರದಿಂದ ಜಾರಿಗೆ ತಂದಿರುವ ಪ್ರತಿಷ್ಠಿತ ಯೋಜನೆಯಾಗಿದೆ.

ಈ ಯೋಜನೆಯಡಿ ಪ್ರತಿ ವರ್ಷ ದೇಶಾದ್ಯಂತ ಅರ್ಹ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಅದಕ್ಕಾಗಿ ರಾಜ್ಯ ಸರ್ಕಾರಗಳು ಅಥವಾ ಸಂಬಂಧಪಟ್ಟ ಶಿಕ್ಷಣ ಸಂಸ್ಥೆಗಳು ಆಯ್ಕೆ ಪರೀಕ್ಷೆಯನ್ನು ನಡೆಸುತ್ತವೆ. ಕರ್ನಾಟಕದ ವಿದ್ಯಾರ್ಥಿಗಳು ರಾಜ್ಯಮಟ್ಟದಲ್ಲಿ ನಡೆಯುವ NMMS ಪರೀಕ್ಷೆಗೆ ಹಾಜರಾಗಬೇಕು.

ಇದರ ಮುಖ್ಯ ಉದ್ದೇಶವೇನು

  • ವಿದ್ಯಾರ್ಥಿವೇತನ ಮೊತ್ತ: ಈ ಪರೀಕ್ಷೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ 9ನೇ ತರಗತಿಯಿಂದ 12ನೇ ತರಗತಿಯವರೆಗೆ (ದ್ವಿತೀಯ ಪಿಯುಸಿಯವರೆಗೆ) ಪ್ರತಿ ತಿಂಗಳು ₹1,000 ದಂತೆ ವರ್ಷಕ್ಕೆ ಒಟ್ಟು ₹12,000 ಗಳನ್ನು 4 ವರ್ಷಗಳವರೆಗೆ ನೀಡಲಾಗುತ್ತದೆ. ಮತ್ತು ಈ ಹಣವನ್ನು ನೇರ ನಗದು ವರ್ಗಾವಣೆ (DBT) ಮೂಲಕ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.
  • ವಿತರಣೆ: DoSEL ನವದೆಹಲಿ ಇವರು ಸಿದ್ಧಪಡಿಸಿರುವ ಎನ್‌ಎಸ್‌ಪಿ 2.0 (NSP 2.0) ವೆಬ್‌ಸೈಟ್ ಮೂಲಕ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮಾ ಆಗುತ್ತದೆ.

NMMS ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ವಿಸ್ತರಣೆ

NMMS Scholarship 2026-27 ನೇ ಸಾಲಿನ ಪರೀಕ್ಷೆಗೆ ಆನ್‌ಲೈನ್ ಅರ್ಜಿ ಸಲ್ಲಿಕೆ ಸೆಪ್ಟೆಂಬರ್ 23, 2026 ರಿಂದ ಆರಂಭವಾಗಿತ್ತು. ಮೊದಲು ಅರ್ಜಿ ಸಲ್ಲಿಸಲು ಅಕ್ಟೋಬರ್ 30 ಕೊನೆಯ ದಿನಾಂಕ ನಿಗಧಿಯಾಗಿತ್ತು. ಆದರೆ ಶಾಲೆಗಳ ಮುಖ್ಯ ಶಿಕ್ಷಕರು ಮತ್ತು ಪ್ರಾಂಶುಪಾಲರ ಮನವಿಯನ್ನು ಪರಿಗಣಿಸಿ ಅರ್ಜಿ ಸಲ್ಲಿಕೆಯ ಅವಧಿಯನ್ನು ಇದೇ ತಿಂಗಳು ನವೆಂಬರ್ 7, ರವರೆಗೆ ಗಡವು ನೀಡಲಾಗಿದೆ.

ಹೀಗಾಗಿ ಅರ್ಜಿ ಸಲ್ಲಿಸಲು ಇನ್ನೂ ಅವಕಾಶವಿದ್ದರೂ ಕೊನೆಯ ದಿನದವರೆಗೆ ಕಾಯುವುದು ಸೂಕ್ತವಲ್ಲ. ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯ ಶಿಕ್ಷಕರನ್ನು ಆದಷ್ಟು ಬೇಗ ಸಂಪರ್ಕಿಸಿ ಅರ್ಜಿಗೆ ಬೇಕಾದ ಮಾಹಿತಿಯನ್ನು ಒದಗಿಸಬೇಕು.

NMMS ಪರೀಕ್ಷೆ ಯಾವಾಗ ನಡೆಯಲಿದೆ?

ಕರ್ನಾಟಕದ NMMS 2026-27 ಆಯ್ಕೆ ಪರೀಕ್ಷೆಯನ್ನು ಡಿಸೆಂಬರ್ 20, 2026ರಂದು ನಡೆಸಲು ದಿನಾಂಕ ನಿಗದಿಪಡಿಸಲಾಗಿದೆ. ಪರೀಕ್ಷೆಯಲ್ಲಿ ಎರಡು ಪತ್ರಿಕೆಗಳಿರುತ್ತವೆ. ಅವುಗಳೆಂದರೆ ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) ಮತ್ತು ಶೈಕ್ಷಣಿಕ ಸಾಮರ್ಥ್ಯ ಪರೀಕ್ಷೆ (SAT).

ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ದಿನಾಂಕನಿಗದಿಪಡಿಸಿದ ಸಮಯ
ಪತ್ರಿಕೆ-1
ಮಾನಸಿಕ ಸಾಮರ್ಥ್ಯ ಪರೀಕ್ಷೆ
(Mental Ability Test-MAT)
20-12-2026
ಭಾನುವಾರ
ಬೆಳಿಗ್ಗೆ 10.30-12.00ರವರೆಗೆ
(ಒಟ್ಟು 90 ನಿಮಿಷಗಳು)
(ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ 30 ನಿಮಿಷ ಹೆಚ್ಚುವರಿ ಸಮಯವಿರುತ್ತದೆ / 30 Minutes extra time will be given to CWSN students)
ಪತ್ರಿಕೆ-2
ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ
(Scholastic Aptitude Test-SAT)
20-12-2026
ಭಾನುವಾರ
ಮಧ್ಯಾಹ್ನ 02.00-03.30ರವರೆಗೆ
(ಒಟ್ಟು 90 ನಿಮಿಷಗಳು)
(ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ 30 ನಿಮಿಷ ಹೆಚ್ಚುವರಿ ಸಮಯವಿರುತ್ತದೆ / 30 Minutes extra time will be given to CWSN students)

ಎರಡೂ ಪತ್ರಿಕೆಗಳಿಗೆ ತಲಾ 90 ನಿಮಿಷಗಳ ಕಾಲಾವಕಾಶವಿರುತ್ತದೆ. ಪರೀಕ್ಷೆಯ ಕೇಂದ್ರ, ಪ್ರವೇಶ ಪತ್ರ ಮತ್ತು ಇತರ ಸೂಚನೆಗಳಿಗಾಗಿ ವಿದ್ಯಾರ್ಥಿಗಳು ತಮ್ಮ ಶಾಲೆಯೊಂದಿಗೆ ಸಂಪರ್ಕದಲ್ಲಿರಬೇಕು.

ಅರ್ಹತಾ ಮಾನದಂಡಗಳು

ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ಈ ಕೆಳಗಿನ ನಿಬಂಧನೆಗಳನ್ನು ಪೂರೈಸಬೇಕು:

  • ಆದಾಯ ಮಿತಿ: ಎಲ್ಲಾ ವರ್ಗದ ವಿದ್ಯಾರ್ಥಿಗಳ ಪೋಷಕರ ವಾರ್ಷಿಕ ವರಮಾನವು ₹3,50,000/- ಮೀರಿರಬಾರದು.
  • ಶಾಲೆ ಮತ್ತು ತರಗತಿ: ವಿದ್ಯಾರ್ಥಿಯು 2026-27ನೇ ಸಾಲಿನಲ್ಲಿ ಸರ್ಕಾರಿ, ಅನುದಾನಿತ ಅಥವಾ ಸ್ಥಳೀಯ ಸಂಸ್ಥೆಗಳ (Local body) ಶಾಲೆಗಳಲ್ಲಿ 8ನೇ ತರಗತಿಯಲ್ಲಿ ರೆಗ್ಯुलर ವಿದ್ಯಾರ್ಥಿಯಾಗಿ ವ್ಯಾಸಂಗ ಮಾಡುತ್ತಿರಬೇಕು.
  • ಅರ್ಹರಲ್ಲದ ವಿದ್ಯಾರ್ಥಿಗಳು: ವಸತಿಯುತ ಶಾಲೆಗಳಾದ (ಮೊರಾರ್ಜಿ ದೇಸಾಯಿ, ಕಿತ್ತೂರುರಾಣಿ ಚೆನ್ನಮ್ಮ, ನವೋದಯ, ವಾಜಪೇಯಿ, ಏಕಲವ್ಯ, ಕೆ.ಜಿ.ಬಿ.ವಿ, ಅಂಬೇಡ್ಕರ್ ವಸತಿ ಶಾಲೆ ಇತ್ಯಾದಿ), ಕೇಂದ್ರೀಯ ವಿದ್ಯಾಲಯ, ಸೈನಿಕ ಶಾಲೆ ಹಾಗೂ ಖಾಸಗಿ ಅನುದಾನರಹಿತ ವಸತಿ ಶಾಲೆಗಳ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
  • ಅಂಕಗಳ ಮಿತಿ: ಸಾಮಾನ್ಯ ಮತ್ತು ಇತರ ಹಿಂದುಳಿದ ವರ್ಗದ (OBC) ವಿದ್ಯಾರ್ಥಿಗಳು 7ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ.55ರಷ್ಟು ಅಂಕಗಳನ್ನು ಪಡೆದಿರಬೇಕು. ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ವಿದ್ಯಾರ್ಥಿಗಳು ಕನಿಷ್ಠ ಶೇ.50ರಷ್ಟು ಅಂಕಗಳನ್ನು ಅಥವಾ ತತ್ಸಮಾನ ಗ್ರೇಡ್ ಹೊಂದಿರಬೇಕು.

NMMS ಪರೀಕ್ಷೆಯ ಮಾದರಿ ಹೇಗಿರುತ್ತದೆ?

NMMS ಪರೀಕ್ಷೆಯಲ್ಲಿ ವಿದ್ಯಾರ್ಥಿಗಳ ತಾರ್ಕಿಕ ಸಾಮರ್ಥ್ಯ ಮತ್ತು ಪಠ್ಯ ವಿಷಯಗಳ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಇದಕ್ಕಾಗಿ ಎರಡು ಪ್ರತ್ಯೇಕ ಪತ್ರಿಕೆಗಳನ್ನು ನಡೆಸಲಾಗುತ್ತದೆ.

ಪತ್ರಿಕೆಯ ವಿವರಒಟ್ಟು ಪ್ರಶ್ನೆಗಳು ಅಂಕಗಳುವಿಷಯವಾರು ವಿವರಣೆ / ಉದ್ದೇಶ
ಪತ್ರಿಕೆ-1: ಮಾನಸಿಕ ಸಾಮರ್ಥ್ಯ ಪರೀಕ್ಷೆ (MAT) 9090 (ಪ್ರತಿ ಪ್ರಶ್ನೆಗೆ 1 ಅಂಕ)ವಿದ್ಯಾರ್ಥಿಗಳ ಕಾರಣ ನೀಡುವ, ವಿಶ್ಲೇಷಿಸುವ ಮತ್ತು ಸಂಶ್ಲೇಷಿಸುವ ಸಾಮರ್ಥ್ಯವನ್ನು ಅಳೆಯುತ್ತದೆ.
ಪತ್ರಿಕೆ-2: ವ್ಯಾಸಂಗಿಕ ಪ್ರವೃತ್ತಿ ಪರೀಕ್ಷೆ (SAT) 90 90ವಿಷಯವಾರು ವಿಂಗಡಣೆ:
• ವಿಜ್ಞಾನ: 35 ಪ್ರಶ್ನೆಗಳು
• ಸಮಾಜ ವಿಜ್ಞಾನ: 35 ಪ್ರಶ್ನೆಗಳು
• ಗಣಿತ: 20 ಪ್ರಶ್ನೆಗಳು

1. Mental Ability Test (MAT):

  • ಸಂಖ್ಯಾ ಸರಣಿಗಳು ಮತ್ತು ಅಕ್ಷರ ಸರಣಿಗಳು
  • ಸಾಮ್ಯತೆ ಮತ್ತು ಭಿನ್ನತೆ ಗುರುತಿಸುವುದು
  • ತಾರ್ಕಿಕ ಚಿಂತನೆ
  • ಆಕೃತಿಗಳ ಆಧಾರದ ಪ್ರಶ್ನೆಗಳು
  • ಗಣಿತದ ತಾರ್ಕಿಕ ಸಮಸ್ಯೆಗಳು
  • ಸಮಸ್ಯೆ ಪರಿಹರಿಸುವ ಸಾಮರ್ಥ್ಯ

2. Scholastic Aptitude Test (SAT):

  • ಗಣಿತ
  • ವಿಜ್ಞಾನ
  • ಸಮಾಜ ವಿಜ್ಞಾನ

ವಿದ್ಯಾರ್ಥಿಗಳು ಎರಡೂ ಪತ್ರಿಕೆಗಳಿಗೆ ಸಮಾನವಾಗಿ ತಯಾರಿ ನಡೆಸುವುದು ಉತ್ತಮ. ಹಿಂದಿನ ವರ್ಷದ ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.

ಉತ್ತೀರ್ಣತೆಗೆ ಕನಿಷ್ಠ ಅಂಕಗಳು (Cut-off):

  • ಸಾಮಾನ್ಯ ಮತ್ತು OBC ವಿದ್ಯಾರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಸರಾಸರಿ ಕನಿಷ್ಠ ಶೇ.40 ರಷ್ಟು ಅಂಕಗಳನ್ನು ಪಡೆಯಬೇಕು.
  • SC ಮತ್ತು ST ವಿದ್ಯಾರ್ಥಿಗಳು ಎರಡೂ ಪತ್ರಿಕೆಗಳಲ್ಲಿ ಸರಾಸರಿ ಕನಿಷ್ಠ ಶೇ.32 ರಷ್ಟು ಅಂಕಗಳನ್ನು ಪಡೆಯುವುದು ಕಡ್ಡಾಯ.

NMMS ಪರೀಕ್ಷೆಗೆ ಆನ್ ಲೈನ್ ನಲ್ಲಿ ಹೇಗೆ ಅರ್ಜಿಸಲ್ಲಿಸುವುದು?

ಅರ್ಜಿ ಸಲ್ಲಿಸಲು ಈ ಕ್ರಮಗಳನ್ನು ಅನುಸರಿಸಿ:

  • ವಿದ್ಯಾರ್ಥಿಗಳು ಅಥವಾ ಪೋಷಕರು ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶವಿರದೆ, ಸಂಬಂಧಪಟ್ಟ ಶಾಲೆಯ ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರು ಕಡ್ಡಾಯವಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
  • ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಲಿಯ ಅಧಿಕೃತ ವೆಬ್‌ಸೈಟ್ https://kseab.karnataka.gov.in ಮೂಲಕ ಶಾಲೆಯ U-DISE ಕೋಡ್ ಬಳಸಿ ಲಾಗಿನ್ ಆಗಿ ಅರ್ಜಿ ಭರ್ತಿ ಮಾಡಲಾಗುತ್ತದೆ.
  • ಪರೀಕ್ಷಾ ಶುಲ್ಕ: ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಾಮಾನ್ಯ/OBC ವಿದ್ಯಾರ್ಥಿಗಳಿಗೆ ₹20/- ಹಾಗೂ SC/ST ವಿದ್ಯಾರ್ಥಿಗಳಿಗೆ ₹10/- ಶುಲ್ಕವಿರುತ್ತದೆ.
  • SC, ST ಹಾಗೂ OBC ಮೀಸಲಾತಿ ಬಯಸುವವರು ಸಕ್ಷಮ ಪ್ರಾಧಿಕಾರದಿಂದ ಪಡೆದ ಚಾಲ್ತಿಯಲ್ಲಿರುವ ಜಾತಿ ಮತ್ತು ಆದಾಯ ಪ್ರಮಾಣಪತ್ರದ RD ಸಂಖ್ಯೆಯನ್ನು ನಮೂದಿಸಬೇಕು.

ಆನ್‌ ಲೈನ್‌ ಅರ್ಜಿ ಸಲ್ಲಿಕೆಗೆ ಅಧಿಕೃತ ವೆಬ್‌ಸೈಟ್: https://kseab.karnataka.gov.in/

ಮತ್ತಷ್ಟು ಓದಿ JEE Main 2027: ಪರೀಕ್ಷಾ ದಿನಾಂಕ, ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಪಠ್ಯಕ್ರಮ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು

ಅರ್ಜಿ ಪ್ರಕ್ರಿಯೆಯಲ್ಲಿ ಯಾವುದೇ ತೊಂದರೆ ಉಂಟಾಗದಂತೆ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಮುಂಚಿತವಾಗಿ ಸಿದ್ಧಪಡಿಸಿಕೊಳ್ಳಬೇಕು. ಸಾಮಾನ್ಯವಾಗಿ ಶಾಲೆಯು ಕೇಳಬಹುದಾದ ದಾಖಲೆಗಳು ಇಂತಿವೆ:

  • ವಿದ್ಯಾರ್ಥಿಯ ಆಧಾರ್ ಕಾರ್ಡ್ ಅಥವಾ ಗುರುತಿನ ವಿವರ
  • 7ನೇ ತರಗತಿಯ ಅಂಕಪಟ್ಟಿ
  • 8ನೇ ತರಗತಿಯ ಶಾಲಾ ಪ್ರವೇಶದ ವಿವರ
  • ವಿದ್ಯಾರ್ಥಿಯ ಭಾವಚಿತ್ರ
  • ಜಾತಿ ಪ್ರಮಾಣಪತ್ರ (ಅನ್ವಯಿಸಿದರೆ)
  • ಕುಟುಂಬದ ಆದಾಯ ಪ್ರಮಾಣಪತ್ರ
  • ಬ್ಯಾಂಕ್ ಖಾತೆಯ ವಿವರಗಳು
  • ಶಾಲೆಯು ಸೂಚಿಸುವ ಇತರ ದಾಖಲೆಗಳು

ದಾಖಲೆಗಳಲ್ಲಿ ವಿದ್ಯಾರ್ಥಿಯ ಹೆಸರು, ಜನ್ಮ ದಿನಾಂಕ ಮತ್ತು ಇತರ ಮಾಹಿತಿಗಳು ಸರಿಯಾಗಿವೆಯೇ ಎಂದು ಪರಿಶೀಲಿಸಿಕೊಳ್ಳಿ. ಅರ್ಜಿ ಸಲ್ಲಿಸುವಾಗ ತಪ್ಪಾದ ವಿವರಗಳನ್ನು ನೀಡುವುದರಿಂದ ಮುಂದಿನ ಪರಿಶೀಲನೆಗೆ ತೊಂದರೆಯಾಗಬಹುದು.

NMMS ವಿದ್ಯಾರ್ಥಿವೇತನದ ಮೊತ್ತ ಎಷ್ಟು?

NMMS Scholarship 2026-27 ಪರೀಕ್ಷೆಯಲ್ಲಿ ಅರ್ಹತೆ ಪಡೆದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000 ವಿದ್ಯಾರ್ಥಿವೇತನ ದೊರೆಯುತ್ತದೆ. ಅಂದರೆ ಪ್ರತಿ ತಿಂಗಳು ₹1,000ರಂತೆ ಆರ್ಥಿಕ ನೆರವು ಸಿಗುತ್ತದೆ.

ಈ ವಿದ್ಯಾರ್ಥಿವೇತನವನ್ನು 9ನೇ ತರಗತಿಯಿಂದ 12ನೇ ತರಗತಿಯವರೆಗೆ ಪಡೆಯಲು ಅವಕಾಶವಿದೆ. ಆದರೆ ಮುಂದಿನ ವರ್ಷಗಳಲ್ಲಿಯೂ ವಿದ್ಯಾರ್ಥಿವೇತನ ಮುಂದುವರಿಯಲು ನಿಗದಿತ ಅಂಕಗಳನ್ನು ಪಡೆಯಬೇಕು ಮತ್ತು ನವೀಕರಣ ಅರ್ಜಿಯನ್ನು ಸಲ್ಲಿಸಬೇಕು. ವಿದ್ಯಾರ್ಥಿವೇತನದ ಹಣವನ್ನು DBT ಮೂಲಕ ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ.

NMMS ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಸಲಹೆಗಳು

ಪರೀಕ್ಷೆಗೆ ಇನ್ನೂ ಸಮಯವಿರುವುದರಿಂದ ವಿದ್ಯಾರ್ಥಿಗಳು ಈಗಿನಿಂದಲೇ ಓದಿನ ಯೋಜನೆ ರೂಪಿಸಿಕೊಳ್ಳುವುದು ಉತ್ತಮ. ಪ್ರತಿದಿನ ಸ್ವಲ್ಪ ಸಮಯವನ್ನು MAT ಮತ್ತು SAT ಅಭ್ಯಾಸಕ್ಕೆ ಮೀಸಲಿಡಿ.

  • 7 ಮತ್ತು 8ನೇ ತರಗತಿಯ ಗಣಿತ, ವಿಜ್ಞಾನ ಹಾಗೂ ಸಮಾಜ ವಿಜ್ಞಾನ ಪಾಠಗಳನ್ನು ಪುನರಾವರ್ತಿಸಿ.
  • ಪ್ರತಿದಿನ ಕನಿಷ್ಠ ಕೆಲವು ತಾರ್ಕಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಬಿಡಿಸಿ.
  • ಹಿಂದಿನ ವರ್ಷದ NMMS ಪ್ರಶ್ನೆಪತ್ರಿಕೆಗಳನ್ನು ಅಭ್ಯಾಸ ಮಾಡಿ.
  • ಸಮಯ ನಿಗದಿಪಡಿಸಿಕೊಂಡು ಮಾದರಿ ಪರೀಕ್ಷೆಗಳನ್ನು ಬರೆಯಿರಿ.
  • ಕಠಿಣ ಪ್ರಶ್ನೆಗಳಿಗೆ ಶಿಕ್ಷಕರ ಸಹಾಯ ಪಡೆಯಿರಿ.
  • ಪರೀಕ್ಷೆಗೆ ಮುನ್ನ ಅಧಿಕೃತ ಸೂಚನೆ ಮತ್ತು ಪ್ರವೇಶ ಪತ್ರದ ವಿವರಗಳನ್ನು ಪರಿಶೀಲಿಸಿ.

ನಿಯಮಿತ ಅಭ್ಯಾಸವು ಆತ್ಮವಿಶ್ವಾಸವನ್ನು ಹೆಚ್ಚಿಸುವುದರ ಜೊತೆಗೆ ಪರೀಕ್ಷೆಯಲ್ಲಿ ಸಮಯವನ್ನು ಸರಿಯಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ.

NMMS Scholarship 2026-27: ಪ್ರಮುಖ ಸೂಚನೆ

ಕರ್ನಾಟಕದ NMMS ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 7, 2026. ಪರೀಕ್ಷೆಯು ಡಿಸೆಂಬರ್ 20, 2026ರಂದು ನಡೆಯಲಿದೆ. ಆದ್ದರಿಂದ ಅರ್ಹ ವಿದ್ಯಾರ್ಥಿಗಳು ತಡಮಾಡದೆ ತಮ್ಮ ಶಾಲೆಯ ಮುಖ್ಯ ಶಿಕ್ಷಕರನ್ನು ಸಂಪರ್ಕಿಸಿ ಅರ್ಜಿ ಸಲ್ಲಿಕೆಯ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು.

ಈ ವಿದ್ಯಾರ್ಥಿವೇತನವು ಪ್ರತಿಭಾವಂತ ಮತ್ತು ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣವನ್ನು ಮುಂದುವರಿಸಲು ಉತ್ತಮ ಅವಕಾಶವಾಗಿದೆ. ಅರ್ಜಿ ಸಲ್ಲಿಸುವ ಮೊದಲು ಅರ್ಹತೆ, ಶಾಲೆಯ ನಿಯಮಗಳು ಮತ್ತು ಅಗತ್ಯ ದಾಖಲೆಗಳ ಬಗ್ಗೆ ಅಧಿಕೃತ ಸೂಚನೆಯನ್ನು ಪರಿಶೀಲಿಸುವುದು ಮುಖ್ಯ.

NMMS Scholarship 2026-27: ಪದೇಪದೇ ಕೇಳಲಾಗುವ ಪ್ರಶ್ನೆಗಳು (FAQs)

1. ಕರ್ನಾಟಕ NMMS 2026-27 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ನವೆಂಬರ್ 7, 2026ರವರೆಗೆ ವಿಸ್ತರಿಸಲಾಗಿದೆ.

2. NMMS ಪರೀಕ್ಷೆ ಯಾವಾಗ ನಡೆಯಲಿದೆ?

ಕರ್ನಾಟಕದ NMMS ಆಯ್ಕೆ ಪರೀಕ್ಷೆ ಡಿಸೆಂಬರ್ 20, 2026ರಂದು ನಡೆಯಲಿದೆ.

3. NMMS ವಿದ್ಯಾರ್ಥಿವೇತನದ ಮೊತ್ತ ಎಷ್ಟು?

ಆಯ್ಕೆಯಾದ ವಿದ್ಯಾರ್ಥಿಗಳಿಗೆ ವರ್ಷಕ್ಕೆ ₹12,000, ಅಂದರೆ ತಿಂಗಳಿಗೆ ₹1,000 ವಿದ್ಯಾರ್ಥಿವೇತನ ದೊರೆಯುತ್ತದೆ.

4. ಯಾವ ತರಗತಿಯ ವಿದ್ಯಾರ್ಥಿಗಳು NMMS ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದು?

2026-27ನೇ ಶೈಕ್ಷಣಿಕ ವರ್ಷದಲ್ಲಿ ಅರ್ಹ ಶಾಲೆಗಳಲ್ಲಿ 8ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

5. NMMS ಪರೀಕ್ಷೆಗೆ ಅರ್ಜಿ ಸಲ್ಲಿಸುವ ವಿಧಾನ ಯಾವುದು?

ವಿದ್ಯಾರ್ಥಿಗಳು ತಮ್ಮ ಶಾಲೆಯ ಮುಖ್ಯ ಶಿಕ್ಷಕರು ಅಥವಾ ಪ್ರಾಂಶುಪಾಲರನ್ನು ಸಂಪರ್ಕಿಸಬೇಕು. ಶಾಲೆಯ ಮೂಲಕ ಆನ್‌ಲೈನ್ ಅರ್ಜಿ ಸಲ್ಲಿಸಲಾಗುತ್ತದೆ.

6. NMMS ವಿದ್ಯಾರ್ಥಿವೇತನ ಎಷ್ಟು ವರ್ಷಗಳವರೆಗೆ ದೊರೆಯುತ್ತದೆ?

ಅಗತ್ಯ ಶೈಕ್ಷಣಿಕ ಅರ್ಹತೆ ಮತ್ತು ನವೀಕರಣ ನಿಯಮಗಳನ್ನು ಪೂರೈಸಿದರೆ 9ರಿಂದ 12ನೇ ತರಗತಿಯವರೆಗೆ ವಿದ್ಯಾರ್ಥಿವೇತನ ಪಡೆಯಬಹುದು.

7. ಪೋಷಕರ ವಾರ್ಷಿಕ ಆದಾಯ ಎಷ್ಟಿರಬೇಕು?

ವಿದ್ಯಾರ್ಥಿಯ ಪೋಷಕರ ಒಟ್ಟು ವಾರ್ಷಿಕ ಆದಾಯ ₹3,50,000 ಮೀರಿರಬಾರದು.

8. NMMS ಅಧಿಕೃತ ವೆಬ್‌ಸೈಟ್ ಯಾವುದು?

ಕರ್ನಾಟಕ NMMS ಪರೀಕ್ಷೆಯ ಮಾಹಿತಿಗಾಗಿ https://kseab.karnataka.gov.in/ ವೆಬ್‌ಸೈಟ್‌ಗೆ ಭೇಟಿ ನೀಡಿ.

ಸೂಚನೆ: ಈ ಲೇಖನವು ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಉದ್ದೇಶಕ್ಕಾಗಿ ಮಾತ್ರ. ಅರ್ಜಿ ದಿನಾಂಕ, ಪರೀಕ್ಷಾ ವೇಳಾಪಟ್ಟಿ, ಅರ್ಹತೆ ಮತ್ತು ದಾಖಲೆಗಳ ಕುರಿತು ಯಾವುದೇ ಬದಲಾವಣೆಗಳಿದ್ದರೆ ಸಂಬಂಧಪಟ್ಟ ಅಧಿಕೃತ ಇಲಾಖೆಯ ಪ್ರಕಟಣೆಯನ್ನೇ ಅಂತಿಮವಾಗಿ ಪರಿಗಣಿಸಿ.

Leave a Comment