JEE Main 2027: ಪರೀಕ್ಷಾ ದಿನಾಂಕ, ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಪಠ್ಯಕ್ರಮ

WhatsApp Group Join WhatsApp Group
Telegram Channel Join Telegram Channel

ಎಂಜಿನಿಯರಿಂಗ್ ಶಿಕ್ಷಣದ ಕನಸು ಕಾಣುತ್ತಿರುವ ವಿದ್ಯಾರ್ಥಿಗಳಿಗಾಗಿ ಬಹುನಿರೀಕ್ಷಿತ JEE Main 2027 ಪರೀಕ್ಷೆಯ ದಿನಾಂಕ, ಅರ್ಜಿ ಸಲ್ಲಿಕೆ ಮತು ಪಠ್ಯಕ್ರಮವನ್ನು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಬಿಡುಗಡೆ ಮಾಡಿದೆ. ಐಐಟಿ (IIT), ಎನ್‌ಐಟಿ (NIT) ಸೇರಿದಂತೆ ದೇಶದ ಪ್ರತಿಷ್ಠಿತ ತಾಂತ್ರಿಕ ಸಂಸ್ಥೆಗಳಲ್ಲಿ ಬಿ.ಇ (B.E), ಬಿ.ಟೆಕ್ (B.Tech) ಹಾಗೂ ಬಿ.ಆರ್ಕ್ (B.Arch) ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಈ ಪರೀಕ್ಷೆ ಅತಿ ಮುಖ್ಯವಾಗಿದೆ. ಜೊತೆಗೆ, JEE Advanced ಬರೆಯಲು ಇದೇ ಮೊದಲ ಮೆಟ್ಟಿಲು. 

National Testing Agency (NTA) JEE Main 2027 ಈಗಾಗಲೇ ಸೆಷನ್ 1ರ ಅರ್ಜಿ ಪ್ರಕ್ರಿಯೆ ಶುರುವಾಗಿದ್ದು, ಪರೀಕ್ಷೆಗೆ ತಯಾರಾಗುತ್ತಿರುವ  ವಿದ್ಯಾರ್ಥಿಗಳಿಗೆ ನೆರವಾಗಲು ಆನ್‌ ಲೈನ್‌ ಅರ್ಜಿ ಸಲ್ಲಿಕೆ ವಿಧಾನ, ಪ್ರಮುಖ ದಿನಾಂಕಗಳು, ಅರ್ಹತೆ ಹಾಗೂ ಪಠ್ಯಕ್ರಮದ ಸಂಪೂರ್ಣ ಮಾಹಿತಿ ಇಲ್ಲಿದೆ. 

JEE Main 2027 – ಪ್ರಮುಖ ಮಾಹಿತಿ

ಮಾಹಿತಿವಿವರ
ಪರೀಕ್ಷೆಯ ಹೆಸರುJoint Entrance Examination (Main) 2027
ಸಾಮಾನ್ಯ ಹೆಸರುJEE Main 2027
ಪರೀಕ್ಷೆ ನಡೆಸುವ ಸಂಸ್ಥೆNational Testing Agency (NTA)
ಪರೀಕ್ಷೆಯ ಮಟ್ಟರಾಷ್ಟ್ರೀಯ ಮಟ್ಟ
Session 1 ಅರ್ಜಿ ಆರಂಭ24 ಅಕ್ಟೋಬರ್ 2026
Session 1 ಅರ್ಜಿ ಕೊನೆಯ ದಿನ22 ನವೆಂಬರ್ 2026
Session 1 ಪರೀಕ್ಷೆ20, 21, 22, 23, 24 ಮತ್ತು 28 ಜನವರಿ 2027
Session 2 ಪರೀಕ್ಷೆ2, 3, 4, 5, 6 ಮತ್ತು 7 ಏಪ್ರಿಲ್ 2027
ಪ್ರಮುಖ ಕೋರ್ಸ್‌ಗಳುB.E./B.Tech, B.Arch, B.Planning
ಪರೀಕ್ಷಾ ವಿಧಾನಮುಖ್ಯವಾಗಿ Computer Based Test (CBT)
ಅಧಿಕೃತ ವೆಬ್‌ಸೈಟ್jeemain.nta.nic.in

JEE Main 2027 ಎಂದರೇನು?

JEE Main ಎಂಬುದು ಎಂಜಿನಿಯರಿಂಗ್, ಆರ್ಕಿಟೆಕ್ಚರ್ ಮತ್ತು ಪ್ಲಾನಿಂಗ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ನಡೆಸಲಾಗುವ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆಯಾಗಿದೆ. ಈ ಪರೀಕ್ಷೆಯನ್ನು National Testing Agency (NTA) ನಡೆಸುತ್ತದೆ.

ವಿಶೇಷವಾಗಿ NITಗಳು, IITಗಳು ಮತ್ತು ಇತರ ಭಾಗವಹಿಸುವ ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಪ್ರವೇಶ ಪಡೆಯಲು JEE Main ಫಲಿತಾಂಶ ಪ್ರಮುಖ ಪಾತ್ರ ವಹಿಸುತ್ತದೆ.

B.E./B.Tech ಪ್ರವೇಶ ಬಯಸುವ ಅಭ್ಯರ್ಥಿಗಳು Paper 1 ಬರೆಯುತ್ತಾರೆ. B.Arch ಕೋರ್ಸ್‌ಗೆ Paper 2A ಮತ್ತು B.Planning ಕೋರ್ಸ್‌ಗೆ Paper 2B ಅನ್ವಯಿಸುತ್ತದೆ.

JEE Main 2027 ಪರೀಕ್ಷಾ ದಿನಾಂಕ

JEE Main 2027 ಅನ್ನು ಎರಡು ಸೆಷನ್‌ಗಳಲ್ಲಿ ನಡೆಸಲಾಗುತ್ತದೆ. ಮೊದಲ ಸೆಷನ್ ಜನವರಿ 2027ರಲ್ಲಿ ಮತ್ತು ಎರಡನೇ ಸೆಷನ್ ಏಪ್ರಿಲ್ 2027ರಲ್ಲಿ ನಡೆಯಲಿದೆ.

JEE Main 2027 Exam Date

ಸೆಷನ್ಪರೀಕ್ಷಾ ದಿನಾಂಕಗಳು
Session 120, 21, 22, 23, 24 ಮತ್ತು 28 ಜನವರಿ 2027
Session 22, 3, 4, 5, 6 ಮತ್ತು 7 ಏಪ್ರಿಲ್ 2027

ಅಭ್ಯರ್ಥಿಗೆ ನಿಗದಿಯಾಗುವ ನಿಖರ ಪರೀಕ್ಷಾ ದಿನ, ಶಿಫ್ಟ್ ಮತ್ತು ಪರೀಕ್ಷಾ ಕೇಂದ್ರದ ವಿವರಗಳನ್ನು ಸಂಬಂಧಿತ ಅಧಿಕೃತ ದಾಖಲೆಗಳಲ್ಲಿ ಪರಿಶೀಲಿಸಬೇಕು.

JEE Main 2027 Session 1 ಪ್ರಮುಖ ದಿನಾಂಕಗಳು

JEE Main 2027 Session 1ಗೆ ಆನ್‌ಲೈನ್ ಅರ್ಜಿ ಪ್ರಕ್ರಿಯೆ ಈಗಾಗಲೇ 24 ಅಕ್ಟೋಬರ್ 2026 ರಂದು ಪ್ರಾರಂಭವಾಗಿದೆ.

ಮಾಹಿತಿದಿನಾಂಕ
ಆನ್‌ಲೈನ್ ಅರ್ಜಿ ಆರಂಭ24 ಅಕ್ಟೋಬರ್ 2026
ಸಾಮಾನ್ಯ ಅರ್ಜಿಯ ಕೊನೆಯ ದಿನ22 ನವೆಂಬರ್ 2026
Late Fee ಸಹಿತ ಅರ್ಜಿ ಅವಧಿ23–26 ನವೆಂಬರ್ 2026
ಅರ್ಜಿ ತಿದ್ದುಪಡಿ ಅವಧಿ27–29 ನವೆಂಬರ್ 2026
Exam City ಮಾಹಿತಿ30 ಡಿಸೆಂಬರ್ 2026
Admit Card13 ಜನವರಿ 2027
Session 1 ಪರೀಕ್ಷೆ20, 21, 22, 23, 24 ಮತ್ತು 28 ಜನವರಿ 2027

ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಇನ್ನು ಕಾಲವಕಾಶ ಇದೆ ಎಂದು ವಿಳಂಬ ಮಾಡದೆ ಮತ್ತು ಕೊನೆಯ ದಿನಾಂಕದವರೆಗೆ ಕಾಯದೆ ಮುಂಚಿತವಾಗಿಯೇ ಅರ್ಜಿ ಸಲ್ಲಿಸುವುದು ಉತ್ತಮ. ಏಕೆಂದರೆ ಇತ್ತಿಚಿಗೆ ತಾಂತ್ರಿಕ ದೋಷ Server Problems ಗಳು ಹೆಚ್ಚಾಗಿರುವುದರಿಂದ ಅರ್ಜಿ ಸಲ್ಲಿಕೆಗೆ ನೀಡಿರುವ ಕೊನೆಯ ದಿನಾಂಕಕ್ಕಿಂತ ಮುಂಚಿತವಾಗಿ ಅರ್ಜಿ ಸಲ್ಲಿಸುವುದು ಒಳ್ಳೆಯದು. ಅರ್ಜಿ ಸಲ್ಲಿಸುವ ಮೊದಲು ಹೆಸರು, ಜನ್ಮ ದಿನಾಂಕ, ಶೈಕ್ಷಣಿಕ ವಿವರಗಳು ಮತ್ತು ಅಗತ್ಯ ದಾಖಲೆಗಳನ್ನು ಸರಿಯಾಗಿ ಪರಿಶೀಲಿಸಿಕೊಳ್ಳಿ.

JEE Main 2027 Session 2 ಪ್ರಮುಖ ದಿನಾಂಕಗಳು

Session 1 ಜೊತೆಗೆ Session 2 ಕೂಡ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಒದಗಿಸುತ್ತದೆ.

ಮಾಹಿತಿದಿನಾಂಕ
Session 2 ಅರ್ಜಿ ಆರಂಭ5 ಜನವರಿ 2027
ಅರ್ಜಿ ಕೊನೆಯ ದಿನ3 ಫೆಬ್ರವರಿ 2027
Late Fee ಸಹಿತ ಅರ್ಜಿ4–7 ಫೆಬ್ರವರಿ 2027
ಅರ್ಜಿ ತಿದ್ದುಪಡಿ8–10 ಫೆಬ್ರವರಿ 2027
Exam City ಮಾಹಿತಿ12 ಮಾರ್ಚ್ 2027
Admit Card25 ಮಾರ್ಚ್ 2027
Session 2 ಪರೀಕ್ಷೆ2, 3, 4, 5, 6 ಮತ್ತು 7 ಏಪ್ರಿಲ್ 2027

ಪರೀಕ್ಷಾ ವೇಳಾಪಟ್ಟಿಯಲ್ಲಿ NTA ಮುಂದಿನ ದಿನಗಳಲ್ಲಿ ಬದಲಾವಣೆ ಮಾಡಿದರೆ ಅಧಿಕೃತ ಪ್ರಕಟಣೆಯನ್ನೆ ಅಂತಿಮ ಮಾಹಿತಿಯಾಗಿ ಪರಿಗಣಿಸಬೇಕು.

JEE Main 2027 ಅರ್ಜಿ ಸಲ್ಲಿಸುವುದು ಹೇಗೆ?

JEE Main 2027 ಅರ್ಜಿಯನ್ನು ಆನ್‌ಲೈನ್ ಮೂಲಕ ಸಲ್ಲಿಸಬೇಕು. ಮೊದಲ ಬಾರಿಗೆ ಅರ್ಜಿ ಸಲ್ಲಿಸುತ್ತಿರುವ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಮಾಹಿತಿಯನ್ನು ಸಂಪೂರ್ಣವಾಗಿ ಓದಿಕೊಂಡು ಎಚ್ಚರಿಕೆಯಿಂದ ಅರ್ಜಿ ಸಲ್ಲಿಸುವುದು ಮುಖ್ಯ.

ಅರ್ಜಿ ಸಲ್ಲಿಸುವ ಸಾಮಾನ್ಯ ವಿಧಾನ

  • JEE Main ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.
  • JEE Main 2027 Session 1 Registration/Application ಲಿಂಕ್ ತೆರೆಯಿರಿ.
  • ಅಗತ್ಯ ಮಾಹಿತಿಯನ್ನು ನೀಡಿ ನೋಂದಣಿ ಪೂರ್ಣಗೊಳಿಸಿ.
  • ಲಭ್ಯವಾಗುವ login ವಿವರಗಳನ್ನು ಬಳಸಿ ಪ್ರವೇಶಿಸಿ.
  • ವೈಯಕ್ತಿಕ ಮತ್ತು ಶೈಕ್ಷಣಿಕ ವಿವರಗಳನ್ನು ಭರ್ತಿ ಮಾಡಿ.
  • ನೀವು ಬರೆಯಬೇಕಾದ Paper/Course ಅನ್ನು ಆಯ್ಕೆ ಮಾಡಿ.
  • ಪರೀಕ್ಷಾ ನಗರಕ್ಕೆ ಸಂಬಂಧಿಸಿದ ಆಯ್ಕೆಗಳನ್ನು ಭರ್ತಿ ಮಾಡಿ.
  • ಅಗತ್ಯವಿರುವ ದಾಖಲೆಗಳನ್ನು ಸೂಚಿಸಿದ format ಮತ್ತು size ನಲ್ಲಿ upload ಮಾಡಿ.
  • ಅನ್ವಯಿಸುವ ಪರೀಕ್ಷಾ ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಿ.
  • ಎಲ್ಲ ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು submit ಮಾಡಿ.
  • Confirmation Page ಅನ್ನು Save ಮಾಡಿ.
  • ಕೊನೆಯದಾಗಿ ಅರ್ಜಿ ಸಲ್ಲಿಸುವಾಗ ಕೆಲವೊಮ್ಮೆ ವಿವರಗಳು ತಪ್ಪಾಗಿ ನಮೂದಾಗಿರುವುದರಿಂದ ಇನ್ನೊಮ್ಮೆ ಹೆಸರು, ಜನ್ಮ ದಿನಾಂಕ ಅಥವಾ ಶೈಕ್ಷಣಿಕ ಮಾಹಿತಿಗಳನ್ನು ಸಂಪೂರ್ಣವಾಗಿ ಪರಿಶೀಲಿಸಿ ಆ ನಂತರ ಅರ್ಜಿಯನ್ನು submit ಮಾಡಿ.

JEE Main 2027 ಅರ್ಜಿ ಸಲ್ಲಿಕೆಗೆ ಬೇಕಾಗುವ ದಾಖಲೆಗಳು

ಅಭ್ಯರ್ಥಿಯ ಪರಿಸ್ಥಿತಿ ಮತ್ತು ವರ್ಗಕ್ಕೆ ಅನುಗುಣವಾಗಿ ದಾಖಲೆಗಳ ಅಗತ್ಯ ಬದಲಾಗಬಹುದು. ಸಾಮಾನ್ಯವಾಗಿ ಅಭ್ಯರ್ಥಿಗಳು ಇವುಗಳನ್ನು ಸಿದ್ಧವಾಗಿಟ್ಟುಕೊಳ್ಳುವುದು ಉತ್ತಮ:

  • ಇತ್ತೀಚಿನ photograph
  • ಅಭ್ಯರ್ಥಿಯ signature
  • Class 10 certificate/marks sheet
  • ಅಗತ್ಯವಿದ್ದರೆ PwD/UDID ಸಂಬಂಧಿತ ದಾಖಲೆ
  • ಅನ್ವಯಿಸಿದರೆ ಇತರ ಅಗತ್ಯ ಪ್ರಮಾಣಪತ್ರಗಳು
  • ಮಾನ್ಯ ಗುರುತಿನ/ವೈಯಕ್ತಿಕ ವಿವರಗಳು
  • ಸಕ್ರಿಯ mobile number ಮತ್ತು email ID

ದಾಖಲೆಗಳ file size ಮತ್ತು format ಬಗ್ಗೆ NTA ನೀಡಿರುವ ಸೂಚನೆಗಳನ್ನು ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ಪರಿಶೀಲಿಸಿ.

JEE Main 2027 ಯಾರು ಅರ್ಹರು

JEE Main 2027ಗೆ ಅರ್ಜಿ ಸಲ್ಲಿಸುವ ಮೊದಲು ಅಭ್ಯರ್ಥಿಗಳು ತಮ್ಮ eligibility ಪರಿಶೀಲಿಸಬೇಕು.

2027 ಪರೀಕ್ಷೆಗೆ ಸಂಬಂಧಿಸಿದ ಪ್ರಕಟಿತ ಮಾಹಿತಿಯ ಪ್ರಕಾರ, 2025 ಅಥವಾ 2026ರಲ್ಲಿ Class 12/ಅದಕ್ಕೆ ಸಮಾನವಾದ qualifying examination ಪಾಸಾದವರು ಹಾಗೂ 2027ರಲ್ಲಿ Class 12 ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿಗಳು JEE Main 2027ಗೆ ಅರ್ಜಿ ಸಲ್ಲಿಸಬಹುದು.

JEE Main ಪರೀಕ್ಷೆಗೆ ಪ್ರತ್ಯೇಕ upper age limit ಇಲ್ಲ. ಆದರೆ ಪ್ರವೇಶ ಪಡೆಯಲು ಬಯಸುವ ಸಂಸ್ಥೆಯ ನಿಯಮಗಳು ಮತ್ತು ಇತರ eligibility requirements ಪ್ರತ್ಯೇಕವಾಗಿ ಅನ್ವಯಿಸಬಹುದು.

ಕೋರ್ಸ್‌ವಾರು ವಿಷಯಗಳ ಅಗತ್ಯ

ಕೋರ್ಸ್Class 12ನಲ್ಲಿ ಅಗತ್ಯ ವಿಷಯಗಳು
B.E./B.TechPhysics ಮತ್ತು Mathematics ಕಡ್ಡಾಯ; ಜೊತೆಗೆ ನಿಗದಿತ ಅನುಮತಿಸಲಾದ ವಿಷಯಗಳಲ್ಲಿ ಒಂದು
B.ArchMathematics, Physics ಮತ್ತು Chemistry
B.PlanningMathematics ಅಗತ್ಯ

JEE Main ಪರೀಕ್ಷೆಗೆ ಹಾಜರಾಗುವ eligibility ಮತ್ತು NIT/IIIT ಮುಂತಾದ ಸಂಸ್ಥೆಗಳಲ್ಲಿ admission ಪಡೆಯುವ eligibility ಒಂದೇ ಎಂದು ಪರಿಗಣಿಸಬಾರದು. ಪ್ರವೇಶಕ್ಕೆ ಪ್ರತ್ಯೇಕ ಶೈಕ್ಷಣಿಕ ಮಾನದಂಡಗಳು ಅನ್ವಯಿಸಬಹುದು.

JEE Main 2027 ಪರೀಕ್ಷಾ ಮಾದರಿ

JEE Main ನಲ್ಲಿ ವಿದ್ಯಾರ್ಥಿ ಆಯ್ಕೆಮಾಡುವ ಕೋರ್ಸ್‌ಗೆ ಅನುಗುಣವಾಗಿ ಬೇರೆ ಬೇರೆ ಪ್ರಶ್ನೆ ಪತ್ರಿಕೆಗಳು ಇರುತ್ತವೆ.

Paperಕೋರ್ಸ್ಪ್ರಮುಖ ವಿಷಯಗಳು
Paper 1B.E./B.TechMathematics, Physics, Chemistry
Paper 2AB.ArchMathematics, Aptitude Test, Drawing Test
Paper 2BB.PlanningMathematics, Aptitude Test, Planning

B.E./B.Tech ಅಭ್ಯರ್ಥಿಗಳಿಗೆ Paper 1 ಅತ್ಯಂತ ಪ್ರಮುಖವಾಗಿದೆ. ಇದು Mathematics, Physics ಮತ್ತು Chemistry ವಿಷಯಗಳ ಜ್ಞಾನವನ್ನು ಪರೀಕ್ಷಿಸುತ್ತದೆ.

ಪರೀಕ್ಷೆಯ question pattern, marking scheme, negative marking ಮತ್ತು duration ಬಗ್ಗೆ ಅಭ್ಯರ್ಥಿಗಳು ಇತ್ತೀಚಿನ Information Bulletin ಅನ್ನು ಪರಿಶೀಲಿಸುವುದು ಉತ್ತಮ.

JEE Main 2027 ಪಠ್ಯಕ್ರಮ

NTA JEE Main 2027 syllabus ಅನ್ನು ಅಧಿಕೃತ JEE Main ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. B.E./B.Tech Paper 1ಗೆ ಮುಖ್ಯವಾಗಿ ಮೂರು ವಿಷಯಗಳಿವೆ:

  • Physics
  • Chemistry
  • Mathematics

ಮುಖ್ಯಾವಾಗಿ ವಿದ್ಯಾರ್ಥಿಗಳು syllabus ಅನ್ನು topic-by-topic ಪರಿಶೀಲಿಸಿ study plan ರೂಪಿಸಿಕೊಳ್ಳುವುದು.

Mathematics ನಲ್ಲಿ ಗಮನಿಸಬೇಕಾದ ವಿಭಾಗಗಳು

JEE Main Mathematics ನಲ್ಲಿ Algebra, Calculus, Coordinate Geometry, Trigonometry, Matrices, Probability, Statistics, Vectors ಮತ್ತು Three-Dimensional Geometry ಮುಂತಾದ ಪ್ರಮುಖ ವಿಭಾಗಗಳಿಗೆ ಸಂಬಂಧಿಸಿದ ವಿಷಯಗಳು ಇರಬಹುದು.

ಪ್ರತಿ chapter ಅನ್ನು ಓದಿದ ನಂತರ problems practice ಮಾಡುವುದು Mathematics ಸಿದ್ಧತೆಯಲ್ಲಿ ಮುಖ್ಯ.

Physics ನಲ್ಲಿ ಗಮನಿಸಬೇಕಾದ ವಿಭಾಗಗಳು

Physicsನಲ್ಲಿ Mechanics, Thermodynamics, Electrostatics, Current Electricity, Magnetism, Optics ಮತ್ತು Modern Physics ಸೇರಿದಂತೆ ವಿವಿಧ ಘಟಕಗಳ ಪರಿಕಲ್ಪನೆಗಳ ಮೇಲೆ ಉತ್ತಮ ಹಿಡಿತ ಅಗತ್ಯ.

Formulaಗಳನ್ನು ಕೇವಲ ನೆನಪಿಟ್ಟುಕೊಳ್ಳುವುದಕ್ಕಿಂತ ಅವುಗಳನ್ನು problemsನಲ್ಲಿ ಹೇಗೆ ಬಳಸಬೇಕು ಎಂಬುದನ್ನು ಅರ್ಥಮಾಡಿಕೊಳ್ಳಿ.

Chemistryನಲ್ಲಿ ಗಮನಿಸಬೇಕಾದ ವಿಭಾಗಗಳು

Chemistry ಸಿದ್ಧತೆಯನ್ನು ಸಾಮಾನ್ಯವಾಗಿ Physical Chemistry, Organic Chemistry ಮತ್ತು Inorganic Chemistry ವಿಭಾಗಗಳಾಗಿ ವ್ಯವಸ್ಥಿತಗೊಳಿಸಬಹುದು.

Concept clarity ಜೊತೆಗೆ reactions, formulas ಮತ್ತು ಪ್ರಮುಖ facts ಗಳನ್ನು ನಿಯಮಿತವಾಗಿ revise ಮಾಡುವುದು ಸಹಾಯಕ.

ವಿದ್ಯಾರ್ಥಿಗಳು ತಮ್ಮ preparation ಅನ್ನು ಅಂತಿಮಗೊಳಿಸುವ ಮೊದಲು NTA ಪ್ರಕಟಿಸಿರುವ ಅಧಿಕೃತ JEE Main 2027 syllabus ಜೊತೆ chapter/topic ಪಟ್ಟಿಯನ್ನು ಹೋಲಿಕೆ ಮಾಡಬೇಕು.

JEE Main 2027 ಪರೀಕ್ಷೆಗೆ ತಯಾರಿ ಹೇಗೆ ನಡೆಸಬೇಕು?

  • JEE Main ನಲ್ಲಿ ಉತ್ತಮ ಫಲಿತಾಂಶ ಪಡೆಯಲು ಹೆಚ್ಚು ಸಮಯ ಓದುವುದಕ್ಕಿಂತ ಸರಿಯಾದ study strategy ಮುಖ್ಯ.
  • ಮೊದಲು ಅಧಿಕೃತ syllabus ಅನ್ನು ಸಂಪೂರ್ಣವಾಗಿ ಪರಿಶೀಲಿಸಿ. ನಂತರ Physics, Chemistry ಮತ್ತು Mathematics ವಿಷಯಗಳಿಗೆ ದಿನನಿತ್ಯದ timetable ರೂಪಿಸಿ.
  • Conceptಗಳನ್ನು ಅರ್ಥಮಾಡಿಕೊಂಡ ನಂತರ chapter-wise questions solve ಮಾಡಿ. Previous year JEE Main question papers ಮತ್ತು mock tests ಅಭ್ಯಾಸ ಮಾಡುವುದರಿಂದ ಪರೀಕ್ಷೆಯ ಸ್ವರೂಪವನ್ನು ಅರ್ಥಮಾಡಿಕೊಳ್ಳಲು ಸಹಾಯವಾಗುತ್ತದೆ.
  • Mock test ಬರೆದ ನಂತರ score ಮಾತ್ರ ನೋಡಬೇಡಿ. ಯಾವ chapterನಲ್ಲಿ ಹೆಚ್ಚು ತಪ್ಪುಗಳಾಗುತ್ತಿವೆ, ಸಮಯ ಎಲ್ಲಿ ವ್ಯರ್ಥವಾಗುತ್ತಿದೆ ಮತ್ತು ಯಾವ conceptsನಲ್ಲಿ ದುರ್ಬಲತೆ ಇದೆ ಎಂಬುದನ್ನು ಗುರುತಿಸಿ.
  • Revisionಗಾಗಿ ಪ್ರತ್ಯೇಕ ಸಮಯ ಮೀಸಲಿಡುವುದು ಸಹ ಮುಖ್ಯ. Formula sheet, short notes ಮತ್ತು ಪ್ರಮುಖ concepts ಅನ್ನು ನಿಯಮಿತವಾಗಿ ಪುನರಾವರ್ತಿಸಿ.

JEE Main 2027 – ವಿದ್ಯಾರ್ಥಿಗಳು ಗಮನಿಸಬೇಕಾದ ವಿಷಯಗಳು

  • JEE Main 2027ಗೆ ಅರ್ಜಿ ಸಲ್ಲಿಸಿದ ನಂತರ confirmation page ಅನ್ನು ಸುರಕ್ಷಿತವಾಗಿ ಉಳಿಸಿಕೊಳ್ಳಿ. Exam city slip ಮತ್ತು admit card ಎರಡೂ ಒಂದೇ ಅಲ್ಲ ಎಂಬುದನ್ನು ಗಮನಿಸಿ.
  • Admit Card ಲಭ್ಯವಾದ ನಂತರ ಅಭ್ಯರ್ಥಿಯ ಹೆಸರು, photograph, examination centre, reporting time, exam date ಮತ್ತು shift ಮುಂತಾದ ವಿವರಗಳನ್ನು ಪರಿಶೀಲಿಸಿ.
  • ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅನಧಿಕೃತ ಮಾಹಿತಿಯನ್ನು ನಂಬುವುದಕ್ಕಿಂತ NTA ಮತ್ತು JEE Main ಅಧಿಕೃತ ವೆಬ್‌ಸೈಟ್‌ನ ಪ್ರಕಟಣೆಗಳಿಗೆ ಆದ್ಯತೆ ನೀಡಿ.

FAQ – JEE Main 2027

1. JEE Main 2027 Session 1 ಅರ್ಜಿ ಆರಂಭವಾಗಿದೆಯೇ?

ಹೌದು. JEE Main 2027 Session 1 ಆನ್‌ಲೈನ್ ಅರ್ಜಿ ಪ್ರಕ್ರಿಯೆ 24 ಅಕ್ಟೋಬರ್ 2026ರಂದು ಆರಂಭವಾಗಿದೆ.

2. JEE Main 2027 ಅರ್ಜಿ ಸಲ್ಲಿಸಲು ಕೊನೆಯ ದಿನ ಯಾವುದು?

Session 1ಗೆ ಸಾಮಾನ್ಯ ಆನ್‌ಲೈನ್ ಅರ್ಜಿ ಸಲ್ಲಿಸಲು 22 ನವೆಂಬರ್ 2026 ಕೊನೆಯ ದಿನವಾಗಿದೆ. NTA ಸೂಚಿಸಿರುವಂತೆ ನಂತರ late-fee window ಕೂಡ ಲಭ್ಯವಿದೆ.

3. JEE Main 2027 Session 1 ಪರೀಕ್ಷೆ ಯಾವಾಗ?

Session 1 ಪರೀಕ್ಷೆ 20, 21, 22, 23, 24 ಮತ್ತು 28 ಜನವರಿ 2027ರಂದು ನಡೆಯಲಿದೆ.

4. JEE Main 2027 Session 2 ಪರೀಕ್ಷೆ ಯಾವಾಗ?

Session 2 ಪರೀಕ್ಷೆಗಳು 2, 3, 4, 5, 6 ಮತ್ತು 7 ಏಪ್ರಿಲ್ 2027ಕ್ಕೆ ನಿಗದಿಯಾಗಿವೆ.

5. JEE Main ಪರೀಕ್ಷೆಯನ್ನು ಯಾರು ನಡೆಸುತ್ತಾರೆ?

JEE Main ಪರೀಕ್ಷೆಯನ್ನು National Testing Agency (NTA) ನಡೆಸುತ್ತದೆ.

6. JEE Main 2027ಗೆ ವಯೋಮಿತಿ ಇದೆಯೇ?

JEE Main ಪರೀಕ್ಷೆಗೆ ಪ್ರತ್ಯೇಕ upper age limit ಇಲ್ಲ. ಆದಾಗ್ಯೂ ಅಭ್ಯರ್ಥಿಗಳು qualifying examination ಮತ್ತು ಸಂಬಂಧಿತ admission eligibility ನಿಯಮಗಳನ್ನು ಪೂರೈಸಬೇಕು.

7. JEE Main 2027 Paper 1ನಲ್ಲಿ ಯಾವ ವಿಷಯಗಳಿವೆ?

B.E./B.Techಗೆ ಸಂಬಂಧಿಸಿದ Paper 1ನಲ್ಲಿ Mathematics, Physics ಮತ್ತು Chemistry ಪ್ರಮುಖ ವಿಷಯಗಳಾಗಿವೆ.

8. JEE Main 2027 ಕನ್ನಡದಲ್ಲಿ ಬರೆಯಬಹುದೇ?

ಹೌದು. JEE Main 2027 ಪರೀಕ್ಷೆಗೆ ಲಭ್ಯವಿರುವ ಭಾಷೆಗಳಲ್ಲಿ ಕನ್ನಡವೂ ಸೇರಿದೆ. ಅರ್ಜಿ ಸಲ್ಲಿಸುವಾಗ ಅನ್ವಯಿಸುವ language option ಅನ್ನು ಎಚ್ಚರಿಕೆಯಿಂದ ಆಯ್ಕೆಮಾಡಿ.

9. JEE Main 2027 syllabus ಬಿಡುಗಡೆಯಾಗಿದೆಯೇ?

ಹೌದು. NTA ಅಧಿಕೃತ JEE Main ವೆಬ್‌ಸೈಟ್‌ನಲ್ಲಿ 2027 syllabus ಲಭ್ಯವಿದೆ.

10. JEE Main ಮೂಲಕ ಯಾವ ಸಂಸ್ಥೆಗಳಿಗೆ ಪ್ರವೇಶ ಪಡೆಯಬಹುದು?

JEE Main ಅಂಕಗಳನ್ನು NITಗಳು, IIITಗಳು, CFTIಗಳು ಹಾಗೂ ಇತರ ಭಾಗವಹಿಸುವ ಸಂಸ್ಥೆಗಳ ವಿವಿಧ ಕೋರ್ಸ್‌ಗಳ ಪ್ರವೇಶ ಪ್ರಕ್ರಿಯೆಯಲ್ಲಿ ಬಳಸಲಾಗುತ್ತದೆ. ಸಂಸ್ಥೆ ಮತ್ತು ಕೋರ್ಸ್‌ಗೆ ಅನುಗುಣವಾಗಿ admission requirements ಬದಲಾಗಬಹುದು.

ನಮ್ಮ ಸಲಹೆ

JEE Main 2027 ಬರೆಯಲು ಸಿದ್ಧತೆ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಈಗ ಅರ್ಜಿ ಪ್ರಕ್ರಿಯೆ ಮತ್ತು ಪರೀಕ್ಷಾ ತಯಾರಿ ಎರಡೂ ಮುಖ್ಯವಾಗಿವೆ. Session 1 ಅರ್ಜಿ 24 ಅಕ್ಟೋಬರ್ 2026ರಂದು ಆರಂಭವಾಗಿದ್ದು, ಸಾಮಾನ್ಯ ಅರ್ಜಿ ಸಲ್ಲಿಸಲು 22 ನವೆಂಬರ್ 2026ರವರೆಗೆ ಅವಕಾಶವಿದೆ.

ಪರೀಕ್ಷೆಗೆ ಇನ್ನೂ ಸಮಯವಿದೆ ಎಂದು preparation ಅನ್ನು ಮುಂದೂಡುವುದಕ್ಕಿಂತ syllabus ಆಧಾರಿತ study plan ರೂಪಿಸಿ Physics, Chemistry ಮತ್ತು Mathematicsಗೆ ಸಮತೋಲನದ ಸಮಯ ನೀಡಿ. ಅರ್ಜಿ, admit card, ಪರೀಕ್ಷಾ ದಿನಾಂಕ ಅಥವಾ ಇತರ ಮಾಹಿತಿಯಲ್ಲಿ ಬದಲಾವಣೆಗಳಿದ್ದರೆ NTA https://jeemain.nta.nic.in/ ಅಧಿಕೃತ ಪ್ರಕಟಣೆಯನ್ನು ಅಂತಿಮ ಮಾಹಿತಿಯಾಗಿ ಪರಿಗಣಿಸಿ.

4 thoughts on “JEE Main 2027: ಪರೀಕ್ಷಾ ದಿನಾಂಕ, ಅರ್ಜಿ ಸಲ್ಲಿಕೆ, ಅರ್ಹತೆ ಮತ್ತು ಪಠ್ಯಕ್ರಮ”

Leave a Comment